विहिप प्रबंध समिती के सदस्य वरिष्ठ प्रचारक श्री बाबुराव जी देसाई (97) का निधन

श्री बाबूराव देसाई (1925 – 2021)

संघ स्वयंसेवकों में बाबूरावजी के नाम से जाने जाने वाले रघुनाथ नारायण राव प्रभु देसाई का शुक्रवार 22.01.2021 को निधन हो गया। 96 साल के अनुभवी प्रचारक, बाबूराव देसाई अपने अंत तक सक्रिय थे।
स्वतंत्रता-पूर्व की वरिष्ठ पीढ़ी के बाबूराव स्वतंत्रता आंदोलन, स्वतंत्रता संस्करण, प्रतिबंध, सामाजिक संगठन, आपातकाल, गोरक्षा आंदोलन, श्रीराम जन्मभूमि आंदोलन, विश्व हिंदू परिषद और श्रीराम जन्मभूमि मंदिर के निर्माण जैसे कार्योंमें सक्रिय थे।

ಶ್ರೀ ಬಾಬೂರಾವ್ ದೇಸಾಯಿ (1925 – 2021)

ಸಂಘ ಸ್ವಯಂಸೇವಕರ ವಲಯದಲ್ಲಿ ಬಾಬೂರಾಯರೆಂದೇ ಪರಿಚಯವಾಗುವ ರಘುನಾಥ ನಾರಾಯಣರಾವ್ ಪ್ರಭು ದೇಸಾಯಿಯವರು ಶುಕ್ರವಾರ 22.01.2021 ರಂದು ರಾತ್ರಿ ನಿಧನರಾದರು. 96 ವಯಸ್ಸಿನ ಹಿರಿಯ ಸಂಘ ಪ್ರಚಾರಕರಾಗಿರುವ ಬಾಬೂರಾವ್ ದೇಸಾಯಿಯವರು ತಮ್ಮ ಕೊನೆಯವರೆಗೂ ಸಕ್ರಿಯರಾಗಿದ್ದರು.
ಗುರೂಜಿ ಗೋಲ್ವಲ್‍ಕರ್‍ರವರು ಸಂಘದ ಸರಸಂಘಚಾಲಕರಾದ ಮೊದಲ ವರ್ಷಗಳಲ್ಲೇ ಸಂಘ ಪ್ರಚಾರಕರಾಗಿ ಹೊರಟ ಬಾಬೂರಾಯರು ಮುಂದಿನ ನಾಲ್ವರು ಸರಸಂಘಚಾಲಕರ ನೇತೃತ್ವದಲ್ಲೂ ಪ್ರಚಾರಕರಾಗಿದ್ದರು.
1949 ರಲ್ಲಿ ಬೆಳಗಾವಿ ನಗರ ಪ್ರಚಾರಕರಾಗಿ ಹೊರಟ ದಿವಂಗತರು ನಂತರ ಕಾರವಾರ. ಧಾರವಾಡ ನಗರ ಪ್ರಚಾರಕರಾಗಿದ್ದು 1967 ರಲ್ಲಿ ಧಾರವಾಡ ವಿಭಾಗ ಪ್ರಚಾರಕರಾದರು. ಕಲ್ಬುರ್ಗಿ ಮತ್ತು ಬಳ್ಳಾರಿ ವಿಭಾಗ ಪ್ರಚಾರಕರಾದ ನಂತರ 1983 ರಲ್ಲಿ ಶ್ರೀರಾಮ ಜನ್ಮಭೂಮಿ ಆಂದೋಲನವು ಪ್ರಾರಂಭವಾಗುತ್ತಿದ್ದಂತೆ ವಿಶ್ವ ಹಿಂದು ಪರಿಷದ್ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿ ನಿಯುಕ್ತಿಗೊಂಡರು. ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಗಳಾಗಿ ನಂತರ ದಕ್ಷಿಣ ಭಾರತದ ಸಂಘಟನಾ ಕಾರ್ಯದರ್ಶಿಗಳಾದರು. ಅವರು ಅಖಿಲ ಭಾರತೀಯ ಕಾರ್ಯದರ್ಶಿಗಳಾಗಿದ್ದ ವರ್ಷಗಳಲ್ಲಿ ಏಕಲ ವಿದ್ಯಾಲಯದ ವಿಭಾಗದ ಪ್ರಭಾರಿಗಳಾಗಿದ್ದರು. ನಂತರ ಗೋರಕ್ಷೆ ಮತ್ತು ಶ್ರೀರಾಮ ಜನ್ಮಭೂಮಿ ಆಂದೋಲನಗಳ ದಕ್ಷಿಣ ಭಾರತದ ನೇತೃತ್ವವನ್ನು ವಹಿಸಿಕೊಂಡರು.
1925 ರಲ್ಲಿ ಪೋರ್ಚುಗೀಸ್ ಗೋವಾದಲ್ಲಿ ಜನಿಸಿದ ಬಾಬೂರಾಯರು ಇಂಗ್ಲೀಷ್ ಸಾಹಿತ್ಯದ ಬಿ.ಎ. ಆನರ್ಸ್ ಪದವಿಯನ್ನು ಚಿನ್ನದ ಪದಕಗಳೊಂದಿಗೆ ಪಡೆದರು. ಕೊಂಕಣಿ, ಮರಾಠಿ, ಹಿಂದಿ, ಇಂಗ್ಲೀಷ್ ಕನ್ನಡ ಭಾಷೆಗಳೊಂದಿಗೆ ಪೋರ್ಚುಗೀಸ್ ಭಾಷೆಯಲ್ಲೂ ಅವರ ಪ್ರಾವೀಣ್ಯವಿದ್ದಿತು.
ಸಂಘ ಜೀವನದಲ್ಲಿ ಅವರಿಗೆ ಯಾದವರಾವ್ ಜೋಷಿ, ಜಗನ್ನಾಥರಾವ್ ಜೋಷಿ, ಭಾವೂರಾವ್ ದೇಶಪಾಂಡೆ, ಸದಾನಂದ ಕಾಕಡೆಯವರು ಪ್ರೇರಣಾ ಶಕ್ತಿಗಳಾಗಿದ್ದರು. 1971 ರಲ್ಲಿ ಗುರೂಜಿ ಗೋಲ್ವಲ್‍ಕರ್‍ರವರು ವೈದ್ಯಕೀಯ ಚಿಕಿತ್ಸೆಗಾಗಿ 35 ದಿನಗಳ ಕಾಲ ಶಿರಸಿಯಲ್ಲಿದ್ದಾಗ ಬಾಬೂರಾಯರು ಅವರ ಆರೈಕೆಯ ಹೊಣೆಯನ್ನು ಹೊತ್ತಿದ್ದರು. ಮೂರು ಬಾರಿ ಸಂಘ ನಿಷೇಧ ಕಾಲದಲ್ಲಿ ಜನಸತ್ಯಾಗ್ರಹದ ನೇತೃತ್ವವನ್ನು ವಹಿಸಿದ ಬಾಬೂರಾಯರು ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಮಿಸಾಬಂಧಿಗಳಾದರು. ತಮ್ಮ ಕಾಲದಲ್ಲಿ ಬಂದ ವಿಶ್ವ ಹಿಂದು ಪರಿಷದ್ ನಿಷೇಧವನ್ನೂ ಅವರು ಎದುರಿಸಿದರು.

ಸ್ವಾತಂತ್ರ್ಯ ಪೂರ್ವಕಾಲದ ಹಿರಿಯ ತಲೆಮಾರಿನ ಬಾಬೂರಾಯರು ಸ್ವಾತಂತ್ರ್ಯ ಚಳುವಳಿ, ಸ್ವಾತಂತ್ರ್ಯ ಸಂಪಾದನೆ, ಸಂಘನಿಷೇಧ, ನಂತರದ ಸಮಾಜ ಸಂಘಟನೆ, ತುರ್ತು ಪರಿಸ್ಥಿತಿ, ಗೋರಕ್ಷಾ ಚಳುವಳಿ, ಶ್ರೀರಾಮ ಜನ್ಮಭೂಮಿ ಅಂದೋಲನ, ವಿಶ್ವ ಹಿಂದು ಪರಿಷದ್ ನಿಷೇಧಗಳ ನಂತರ ಈಗ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣಗಳಂತಹ ಮಹತ್ವದ ಘಟನೆಗಳಿಗೆ ಅವರು ಸಕ್ರಿಯ ಸಾಕ್ಷಿಗಳಾಗಿದ್ದರು.

ಕಾರ್ಯಕರ್ತರೊಂದಿಗೆ ವಾತ್ಸಲ್ಯಪೂರ್ಣ ಸಂಬಂಧದೊಂದಿಗೆ ಅವರ ಜೀವನೋತ್ಸಾಹ, ಹಾಸ್ಯ ಪ್ರವೃತ್ತಿ, ಪ್ರಚಲಿತ ವಿಚಾರಗಳ ಸೂಕ್ಷ್ಮ ವಿಶ್ಲೇಷಣೆಗಳೊಂದಿಗೆ ಅವರ ಶಿಶುಸಹಜ ಮುಗ್ಧತೆಯು ಜನಸಂಗ್ರಹದ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ್ದವು.