ವಿಶ್ವಹಿಂದೂ ಪರಿಷತ್ 1964 ನೇ ಇಸವಿಯ ಆಗಸ್ಟ್
29ರಂದು, ಕೃಷ್ಣಜನ್ಮಾಷ್ಟಮಿಯ ಶುಭದಿನದಂದು ಭಾರತದ
ಸಂತ ಶಕ್ತಿ ಹಾಗು ಆಶೀರ್ವಾದದೊಂದಿಗೆ
ಸ್ಥಾಪನೆಯಾಯಿತು. ವಿಶ್ವ ಹಿಂದೂ ಪರಿಷತ್ತಿನ ಮೂಲ
ಧ್ಯೇಯೋದ್ದೇಶಗಳೆಂದರೆ ಹಿಂದೂ ಶಕ್ತಿಯನ್ನು
ಕ್ರೂಢೀಕರಿಸಿ ಹಿಂದೂ ಧರ್ಮದ ರಕ್ಷಣೆಗೆ ಮತ್ತು ಹಿಂದೂ
ಧರ್ಮದ ಸೇವೆಗೆ ಜೋಡಿಸುವುದು.
ಭಾರತದಾದ್ಯಂತ ಲಕ್ಷಾಂತರ ಹಳ್ಳಿಗಳಲ್ಲಿ ಹಿಂದೂ
ಧಾರ್ಮಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು ಹಾಗೂ
ಸದೃಢ , ಸಶಕ್ತ ಮತ್ತು ಪ್ರಬಲ ಹಿಂದೂ ಸಮಾಜವನ್ನು
ಕಟ್ಟುವುದು .
ವಿಶ್ವದಾದ್ಯಂತ ಹೆಚ್ಚುತ್ತಿರುವ ಹಿಂದೂ ಸಮಾಜದ ಬಗೆಗಿನ
ಒಲವು ಹಾಗು ಧಾರ್ಮಿಕ ಚಟುವಟಿಕೆಗಳಿಂದ, ಸಶಕ್ತ ಹಾಗೂ
ಸದೃಢ ಹಿಂದೂ ಸಂಘಟನೆ ರೂಪುಗೊಳ್ಳುತ್ತಿದೆ. ಹಿಂದೂ
ಸಮಾಜವನ್ನು ಸದೃಢಗೊಳಿಸುವಲ್ಲಿ ಲಕ್ಷಾಂತರ ಸೇವಾ
ಚಟುವಟಿಕೆಗಳು ನಡೆಯುತ್ತಿವೆ ಅದರಲ್ಲಿ ಪ್ರಮುಖವಾದವು
ಆರೋಗ್ಯ, ಶಿಕ್ಷಣ, ಆತ್ಮ ನಿರ್ಭರತೆ ಮತ್ತು ಗ್ರಾಮ
ಶಿಕ್ಷಣ ಮುಂತಾದವುಗಳು
ವಿಶ್ವ ಹಿಂದೂ ಪರಿಷತ್ ಸಾಮಾಜಿಕ ಪಿಡುಗಾದಂತಹ
ಅಸ್ಪೃಶ್ಯತೆಯ ನಿರ್ಮೂಲನೆಗೆ ಪಣತೊಟ್ಟಿದೆ
ಶ್ರೀರಾಮ ಜನ್ಮಭೂಮಿ , ಶ್ರೀ ಅಮರನಾಥಯಾತ್ರೆ , ಶ್ರೀ
ರಾಮಸೇತು, ಶ್ರೀ ಗಂಗಾ ರಕ್ಷ, ಗೋ ರಕ್ಷ, ಹಿಂದೂ
ಮಠ-ಮಂದಿರಗಳ ಸಮಸ್ಯೆಗಳು, ಮತಾಂತರಗಳು, ಇಸ್ಲಾಂ
ಭಯೋತ್ಪಾದನೆ, ಬಾಂಗ್ಲಾದೇಶಿ ಮುಸ್ಲಿಮರ ನುಸಳುಕೊರತನ
ಇಂತಹ ಸಮಸ್ಯೆಗಳನ್ನು ಎದುರಿಸಲು ವಿಶ್ವಹಿಂದೂ ಪರಿಷತ್
ಒಂದು ಸಶಕ್ತ ಸಂಘಟನೆಯಾಗಿ ರೂಪಗೊಂಡಿದೆ
ವಿಶ್ವ ಹಿಂದೂ ಪರಿಷತ್ ನ ಪ್ರಯತ್ನದಿಂದ ಎಲ್ಲಾ
ಸಂಪ್ರದಾಯಗಳ ಎಲ್ಲಾ ಧರ್ಮಾಚಾರ್ಯರು ಒಂದಾಗಿ ಹಿಂದೂ
ಧರ್ಮದ ರಕ್ಷಣೆಗೆ ನಿಂತಿದ್ದಾರೆ.
· ಬಹುಮುಖಿ ಸೇವಾ ಚಟುವಟಿಕೆಗಳು ಇರುವುದರಿಂದ ಎಲ್ಲ
ರೀತಿಯಾದ ಜನಗಳಿಗೆ ಹಿಂದೂ ಸಮಾಜದ ಸೇವೆಯನ್ನು ಮಾಡಲು
ಅವಕಾಶ ಸಿಕ್ಕಿದೆ.
· ಸಾಮಾಜಿಕ ಪಿಡುಗುಗಳನ್ನು ನಿರ್ಮೂಲನೆ ಮಾಡಲು
ಸಾಧ್ಯವಾಗಿದೆ
· ಹಿಂದೂ ಜಾಗರಣ ಹಾಗೂ ನಮ್ಮತನದ ಬಗ್ಗೆ ಹೆಮ್ಮೆ ಹಾಗೂ
ಒಗ್ಗಟ್ಟನ್ನು ಮೂಡಿಸಿದೆ
· ಲಕ್ಷಾಂತರ ಜನರು ಮರಳಿ ತಮ್ಮ ಮೂಲ ಧರ್ಮವಾದ ಹಿಂದೂ
ಧರ್ಮಕ್ಕೆ ಪರಿವರ್ತನೆಯಾಗಿ ಸ್ವಪ್ರೇರಣೆಯಿಂದ ಬರಲು
ಇಚ್ಛಿಸಿದ್ದಾರೆ ಹಾಗೂ ಬಂದಿದ್ದಾರೆ.